= ಶಾಂತಾರಾಮ ನಾಯಕ ಹಿಚಕಡ = == ಶಾಂತಾರಾಮ ನಾಯಕ ಹಿಚಕಡ == ಶಾಂತಾರಾಮ ನಾಯಕ ಹಿಚಕಡರವರ ಪೂರ್ಣ ಹೆಸರು ಶಾಂತಾರಾಮ ನಾರಾಯಣ ನಾಯಕ. === ಜನನ === ಶಾಂತಾರಾಮ ನಾರಾಯಣ ನಾಯಕರವರು ಸ್ವಾತಂತ್ರ್ಯಯೋಧರ ಕುಟುಂಬದಲ್ಲಿ, ೧೯೩೯ ಮಾರ್ಚ್ ೨೩ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಹಿಚಕಡದಲ್ಲಿ ಜನಿಸಿದರು. ==== ಶಿಕ್ಷಣ ==== ಇವರು ಹಿಂದಿ ರಾಷ್ಟ್ರಭಾಷಾ ವಿಶಾರದಾ ಪದವಿಯನ್ನು ಪಡೆದಿದ್ದಾರೆ. ಇದರೊಂದಿಗೆ ಎಂ.ಎ ಪದವಿಯನ್ನು ಪಡೆದಿದ್ದಾರೆ. ಹಾಗೂ ಬಿ.ಎಡ್ ಕೂಡಾ ಮಾಡಿದ್ದಾರೆ. ===== ಶಿಕ್ಷಕ ವೃತ್ತಿ ===== ಕೆನರಾ ವೆಲ್‌ಫೇರ್ ಟ್ರಸ್ಟಿನ ಮೊದಲ ಹೈಸ್ಕೂಲ್ ಪಿ . ಎಮ್ . ಹೈಸ್ಕೂಲಿನಲಿ ಸಹಶಿಕ್ಷಕರಾಗಿ 1961ರಲ್ಲಿ ಸೇವೆ ಪ್ರಾರಂಭಿಸಿ, ಶೆಟಗೇರಿ ಸತ್ಯಾಗ್ರಹ ಸಾರಕ ವಿದ್ಯಾಲಯದಲ್ಲಿ ಸಹಶಿಕ್ಷಕರಾಗಿ, ಮುಖ್ಯಾಧ್ಯಾಪಕರಾಗಿ ದೀರ್ಘಕಾಲ ಸೇವೆ ಸಲ್ಲಿಸಿ 1997ರಲ್ಲಿ ನಿವೃತ್ತಿ ಹೊಂದಿದರು. ====== ಪ್ರಶಸ್ತಿಗಳು ====== ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ , ರಾಜ್ಯ ಶಿಕ್ಷಕ ಪ್ರಶಸ್ತಿ , ಡಾ ॥ ಸೈಯ್ಯದ್ ಝಮೀರುಲ್ಲಾ ಫರೀಫ್ ಕಾವ್ಯ ಪ್ರಶಸ್ತಿ , ಸಾಹಿತ್ಯ ಮತ್ತು ಸಮಾಜ ಸೇವೆಗಾಗಿ ಹೊಯ್ಸಳ ಪ್ರಶಸ್ತಿ . ( ಹೊಯ್ಸಳ ಕನ್ನಡ ಸಂಘ ಮತ್ತು ಸವಿಗನ್ನಡ ಪತ್ರಿಕಾ ಬಳಗ ಮೈಸೂರು ) ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ , ಸುಸ್ತು ಮಾಸ್ತರ ಪ್ರಶಸ್ತಿ , ಸಾಹಿತ್ಯ ಸೇವೆಗಾಗಿ 2019ರ ಶ್ರೀ ಆರ್ . ಎನ್ . ನಾಯಕರ ಪ್ರಶಸ್ತಿಗಳು ಇವರಿಗೆ ದೊರಕಿವೆ. == ಲೇಖಕರ ಪ್ರಕಟಿತ ಕೃತಿಗಳು == === ಕವನ ಸಂಗ್ರಹಗಳು === ಕಾಡಹೆಣ್ಣು, ದಾರಿಮಾಡಿಕೊಡಿ, ಅನುಭವ, ಆತಂಕ, ಅನುರಾಗ, ನಿನಾದ, ಸಂಭ್ರಮ ಮತ್ತು ಒಡಲಗೀತ ಇವರ ಕವನ ಸಂಗ್ರಹಗಳು. === ಚರಿತ್ರೆ === ಚರಿತ್ರೆಯಲ್ಲಿ ಮರೆತವರ ಕಥೆ ಮತ್ತು ಸ್ವಾತಂತ್ರ್ಯ ಹೋರಾಟದ ಹೊರಳುನೋಟ ಇವರು ಬರೆದ ಚರಿತ್ರೆಗಳು. === ಜೀವನ ಚರಿತ್ರೆ === ಮಾನಧನ ಎಂ . ಎಚ್ . ನಾಯಕ, ಶಿಕ್ಷಕ ಕವಿ ವಿ . ವೆ , ತೊರ್ಕೆ, ಕರುಣಾಳು ಸ , ಪ . ಗಾಂವಕರ, ಕರಬಂಧಿ ಡಿಕ್ಟೇಟರ್ ಬಾಸಗೋಡ ರಾಮ ನಾಯಕ, ಚುಟುಕು ಬ್ರಹ್ಮ ದಿನಕರ ದೇಸಾಯಿ ಮತ್ತು ಗೊನೇಹಳ್ಳಿಯ ಬೆಳಕು ಇವರು ರಚಿಸಿದ ಜೀವನ ಚರಿತ್ರೆಗಳು. === ಪ್ರಬಂಧ === ಇವರು ಬರೆದ ಪ್ರಬಂಧಗಳೆಂದರೆ ನಾಡವರು ಒಂದು ಸಾಂಸ್ಕೃತಿಕ ಅಧ್ಯಯನ, ಹಂಬಲ, ಹುಡುಕಾಟ ಮತ್ತು ಒಡನಾಟ. === ಕಥೆ === ಮಂಡಕ್ಕಿ ತಿಂದ ಗಂಗೆ ಇವರು ಬರೆದ ಕಥೆಯಾಗಿದೆ. {} ಎಲ್ಲಾ ಮಾಹಿತಿಯನ್ನು ಅವರ ಪುಸ್ತಕಗಳಿಂದ ಮತ್ತು ಅವರ ವೈಯಕ್ತಿಕ ಭೇಟಿಯಿಂದ ಪಡೆಯಲಾಗಿದೆ.{/}